ವಿಮಾನದ ಬಗ್ಗೆ ಇದ್ದ ಕಲ್ಪನಾ

ನೀ ಆದರ ಜೈಪುರ್ ಕ್ಕ ವಿಮಾನದ್ಲೆ ಹೋದಿ..ನಂಗ ಆದರ ಇನ್ನು ಕರಕೂಂಡ ಹೋಗಿಲ್ಲಲಾ ಅಮ್ಮಾ?ಭಾಳ ಕೆಟ್ಟ ಇದ್ದಿ” ಅಂತ ನಮ್ಮ ಪೂರಿ ಅಂದರ ನನ್ನ ಮಗಳು,ಮಂಗಳವಾರ ಸಂತ್ಯಾಗ ಮಾಡತಾರಲಾ ಹಂಗ ಝಗಳಾ ತಗದ್ಲು..ಆತು ಬಿಡು ಅಳಬ್ಯಾಡಾ ಅಪ್ಪಿ,ಬೆಂಗಳೂರಿಗೆ ಹೂಗೊಮುಂದ ವಿಮಾನದಾಗ್ ಹೋಗೂಣು ಮುಂದಿನ ವಾರಾ ಅಂತ ಸಮಧಾನಾ ಮಾಡಿದೆ.ಪಾಪ ಅಂತ್ ಟಿಕೆಟ್ ಬುಕ್ ಮಾಡ್ಲಿಕತ್ತಿದ್ದೆ ಖರೆ ಯಾಕೋ ನಂಗ ಬ್ಯಾಡಾ ಅನಸ್ತು..ವಿಚಾರ ಮಾಡಿದೆ..ನಾನು ಮೊದಲನೇ ಸರೆ ವಿಮಾನ ಹತ್ತಿದ್ದು ಮೊನ್ನೆ ಮೊನ್ನೆ..೨೫ ವರಶದ ತನಕಾ ನಂಗ, ಆ […]

Read more "ವಿಮಾನದ ಬಗ್ಗೆ ಇದ್ದ ಕಲ್ಪನಾ"

ಅಸಹೋತು ಲಾಲಖಿ ನಾರುಳಿಗೆಪ್ಪಾ ಡುಡ್ಡುರು

ಹೆಬ್ಬಳ್ಳಿ ನಮ್ಮ್ ಊರು,ಧಾರವಾಡದಿಂದ ೧೩ ಕಿ ಮಿ ದೊರದಾಗಿರೊ well planned ಹಳ್ಳಿ..ಕುರುಬರ ಓಣಿ,ಸಾದರ ಓಣಿ,ಕಮತರ ಓಣಿ,ಸುಣಗಾರ ಓಣಿ ಅಂತ ಅವರವರ ಉದ್ಯೋಗದ ಪ್ರಕಾರ ಇರತಾರ್.ನಾವೆಲ್ಲಾ ಧಾರವಾಡ ಸಾಲಿಗೆ ಹೋಗತಿದ್ವಿ.೧೦ ಕ್ಕ ಸಾಲಿ ಶುರು ಆಗತಿತ್ತು ಅಂದ್ರ ನಾವು ೮;೪೫ ಕ್ಕ ಮನಿ ಬಿಡಬೇಕಾಗ್ತಿತ್ತು ಬಸ್ ನ್ಯಾಗ ಮಸ್ತ ಧಾಂದಲೇ ಹಾಕೋದು,ಯಾರಿಗೆ ಕೊಡಲಿಕ್ಕೆ ಜಾಗಾ ಸಿಗತದೋ ಅವರದು ಫಜಿತಿ,ಎಲ್ಲಾ ಹುಡಗುರು ಪಾಟಿಚೀಲಾ ಅವರ ಮ್ಯಾಲೆ ಧಪ್ ಧಪ್ ಒಗದ ಅವರನ್ನ ಮುಳಗಿಶೇ ಬಿಡೊದು.ನಾವೆಲ್ಲಾ ಬರೆ ಕತ್ತಿ ಕಾರಬಾರಾ […]

Read more "ಅಸಹೋತು ಲಾಲಖಿ ನಾರುಳಿಗೆಪ್ಪಾ ಡುಡ್ಡುರು"

“ಅಕ್ಕಾ”ಬೇಕು

ನಾನು ಸಣ್ಣಾಕಿದ್ದಾಗ ಅಮ್ಮಾ ನನ್ನ ಹತ್ರ ಬಂದು ನಿನಗ ತಂಗಿ ಬೇಕಾ,ತಮ್ಮಾ ಬೇಕಾ ಅಂತ ಕೇಳಿದಾಗ,ನಂಗ ಇಬ್ಬರು ಬ್ಯಾಡಾ “ಅಕ್ಕಾ”ಬೇಕು ಅಂದೆ,ಅದಕ್ಕ ಅಕಿ “ಅಯ್ಯ ಹುಚ್ಚು ಹುಡುಗಿ ನೀನು ದೊಡ್ಡಾಕಿ,ನೀನೆ ಅಕ್ಕಾ ಇನ್ನ ಬರಾವ್ರು ನಿನ್ನಕಿಂತಾ ಸಣ್ಣಾವ್ರು” ಅಂತ ತಲಿಗೆ ಒಂದು ಪೆಟ್ಟುಕೊಟ್ಟು ನಕ್ಕೋತ ಹೋದಳು,ಮುಂದ ಸ್ವಲ್ಪ ದಿನಕ್ಕ ನನಗ ತಂಗಿ ಹುಟ್ಟಿದ್ಲು,ಬೆಕ್ಕಿನ ಹಂಗ ಕಣ್ಣು,ಗುಂಡ ಮುಖಾ,ಕೆಂಪು ಬಣ್ಣಾ,ಅಗದಿ ಛಂದ ಕೂಸು,..mostly ನಂಗ ಅಕ್ಕಾ ಬೇಕು ಅಂದದ್ದು ಅಶ್ವಿನಿ ದೇವತೆಗಳು ಕೇಳಶ್ಕೊಂಡು “ತಥಾಸ್ತು” ಅಂದಿದ್ರೊ ಏನೋ,೯ ವರ್ಷ […]

Read more "“ಅಕ್ಕಾ”ಬೇಕು"

Plastic ತುಂಬಿದ ವಾತಾವರಣ

ವಸುಧೇಂದ್ರ ಅವರು ಬರೆದ ಸುಳ್ಳು ನಮ್ಮಲ್ಲಿಲ್ಲವಯ್ಯಾ ಅಂತ ಕತಿ ಒಳಗ ಅಜ್ಜಿ ಮೊಮ್ಮಕಳಿಗೆ ಕತಿ ಹೇಳು ಮುಂದ “ನಾವು ಸಣ್ಣಾವ್ರು ಇದ್ದಾಗ” ಅಂತ ಶುರು ಮಾಡಿತಿದ್ಲು,ಅದಕ್ಕ ಆ ಮೊಮ್ಮಕ್ಕಳು “ಅಜ್ಜಿ ಬರೆ ನೀನು,ನಾವು ಸಣ್ಣಾವ್ರಿದ್ದಾಗ ಅಂತ ಕತಿ ಶುರು ಮಾಡ್ತಿ,ನಾವು ಸಣ್ಣಾವ್ರಿದ್ದಾಗಿಂದು ಹೇಳು”ಅಂದಾಗ ಅಯ್ಯ ನೀವು ಸಣ್ಣಾವ್ರಿದ್ದಾಗಿಂದು ಹೇಳಿಕ್ಕೆ ಅದ ಏನು? ಎದ್ದ ಬಿದ್ರ ಸಾಲಿ,TV,ಹೇನು ವರಯಾವರ ಗತೆ Mobile,ಬಾಗಲಾ ತಗದು ಹೋರಗ ಹೋದರೆ ಮುಂದ ಏನರೆ ಆಗೋದು,ಅಂತ ಅಂದ ಹಂಗ..ನಾವು ಸಣ್ಣಾವ್ರಿದ್ದಾಗ ನಮ್ಮದ ಒಂದು ಟೋಳಿ […]

Read more "Plastic ತುಂಬಿದ ವಾತಾವರಣ"

ನಿದ್ದೆ ಮುಗಿಯಿತು ಮುದ್ದಿನ ಮಗುವಿನದು

ನಿದ್ದೆ ಮುಗಿಯಿತು ಮುದ್ದಿನ ಮಗುವಿನದು ತಣ್ಣನೆಯ ಎಣ್ಣೆ ಬಿಸಿಗೊಯ್ದೆನೆ.. ಉರುವಲಿಗೆ ಕಟ್ಟಿಗೆಯ ಕೆಂಡದ ಕೆಂಪು ಅಲ್ಲಲ್ಲಿಗೆ ನುಸುಳಿದ ಸೂರ್ಯನ ಸಂಪು ಸೀಗೆಕಾಯಿಯ ಉರಿಮಧುರ ಸುವಾಸನೆ ಮಲ್ಲಿಗೆಯ ಬಿಳಿ ಬಟ್ಟೆ ಕಟ್ಟೆನೆ

Read more "ನಿದ್ದೆ ಮುಗಿಯಿತು ಮುದ್ದಿನ ಮಗುವಿನದು"

ಹಾಡು ನೆನಪ ಆತು

ನಾನು ೬ನೇ ತ್ತಾ ಇದ್ದೆ,ಸಾಲಿ ಒಳಗ science experiment ಮಾಡ್ರಿ,ನಿಮ್ಮನ್ನಾ ಜಿಲ್ಲಾ ಮಟ್ಟದ ಸ್ಪರ್ಧೆಕ್ಕ ಕಳಸ್ತೀವಿ ಅಂತ ಹೇಳಿದ್ರು.ಸರಿ ಅಂತ ನಾನು ನನ್ನ ಗೆಳತಿ ಭಾರ್ಗವಿ ನಾಡಗೌಡ ಇಬ್ಬರು ಕೂಡಿ ಒಂದು experiment ತಯಾರ್ ಮಾಡ್ಕೊಂಡ್ವಿ.ಆವಾಗ ಶ್ರೀ ಜೇವೂರ ಸರ್ ನಮಗ ಹೆಡ್ ಮಾಸ್ತರ ಇದ್ದರು.ಅವರ ಮುಂದ ಹೋಗಿ ನಾವಿಬ್ರು ಭಾರಿ explain ಮಾಡ್ಲಿಕ್ಕೆ ಶುರು ಮಾಡಿದ್ವಿ.”Good morning sir,ನಾವಿಬ್ರು ಇಗ ಒಂದು experiment ತಯಾರ್ ಮಾಡಿವ್ರಿ,ನೀವು yes ಅಂದ್ರ ಶುರುಮಾಡ್ತಿವ್ರಿ ಅಂತ,ಆತು ಹೇಳ್ರಿ ಏನ್ ಮಾಡ್ತೀರಿ […]

Read more "ಹಾಡು ನೆನಪ ಆತು"