“ಗೋಲ್ಡನ ಡೇಯ್ಸ್ ಆಫ಼್ ಮಾಯ್ ಲೈಫ಼್”

ಇವತ್ತು ಅರ್ಧ ದಿನ ಶಾಲೆ ಮುಗಿಸಿ ನನ್ನ ಮಗಳು ಬಂದು ತನ್ನ ಬಟ್ಟು ತೋರಿಸಿ “ಅಮ್ಮ ನಮ್ಮ ಶಾಲೆಲಿ ಎಲೆಕ್ಷನ್ ಇತ್ತು, ನಾನೂ ವೊಟ್ ಹಾಕಿದೆ ಅದು ವೋಟರ್ ಕಾರ್ಡ್ ಇಲ್ಲದೇ! ಅದಕ್ಕೆ ನನ್ನ ಫ಼ಿಂಗರಿಗೆ ಮಾರ್ಕ್ ಹಾಕಿದಾರೆ” ಅಂತ ಭಾರಿ ಹುರುಪಿನಿಂದ ಬಂದು ಹೇಳಿದಳು. ನನಗೆ ನಾನು 10ನೇ ತರಗತಿಯಲ್ಲಿದ್ದಾಗಿನ ಚುನಾವಣೆ ನೆನಪಾಯಿತು. ಸತ್ವಶೀಲಾದೇವಿ ಹೆಣ್ಣು ಮಕ್ಕಳ ಶಾಲೆ ಅಥಣಿ. 8ನೇ ತರಗತಿ ವರೆಗೂ ಧಾರವಾಡದ ಕ ನಾ ಕ ಬಾಲಿಕೆಯರ ಶಾಲೆಯಲ್ಲಿದ್ದೆ, ಅನಾರೋಗ್ಯದ ಕಾರಣ […]

Read more "“ಗೋಲ್ಡನ ಡೇಯ್ಸ್ ಆಫ಼್ ಮಾಯ್ ಲೈಫ಼್”"

ಕಾಆಆಆಆಅರ್ ಅನ್ನೋದೆ ಒಂದು ಲಗ್ಜುರಿ ಫೀಲಿಂಗು.

ಕಾರ್ ಕಾರ್ ಕಾರ್ ಎಲ್ನೋಡಿ ಕಾರ್…ಹಾಡು ಯಾರಿಗೆ ಗೋತ್ತಿಲ್ಲ? ಮಾಯ್ ಫ಼ರ್ಸ್ಟ ಕಾರ್,ಮಾಯ್ ನ್ಯು ಕಾರ್, ಹೀಗೆ ನಮ್ಮ ಅಪ್ಪಾಜಿಗೂ ಕಾರಿನ ಕ್ರಶ್…ನಾವು ಹೇಗಿದಿವಿ ಅಂತ ಕೇಳುವದನ್ನ ಮರೆತರೂ ಕಾರ್ ಹೇಗಿದೆ? ಸರಿಯಾಗಿ ನಡಿತಿದೆಯಾ? ಅದನ್ನ ಗ್ಯಾರೆಜ್ ಒಳಗಡೆ ಇಡೊಕೆ ಹೇಳು,ಇಲ್ಲಾ ಮಂಜು ಬಿದ್ದು ಕಲರ್ ಹೋಗತ್ತೆ,ಸ್ವಲ್ಪ ಜೋರಾಗಿ ಬಾಗಿಲು ಹಾಕಿದರೆ ತಮಗೆ ಪೆಟ್ಟು ಬಿದ್ದವರ ಹಾಗೆ ನೊಂದುಕೊಳ್ಳತ್ತಾರೆ. ನನಗೆ ನೆನೆಪಿದೆ ನಾನು ಅಪ್ಪಾಜಿ ಧಾರವಾಡದಿಂದ ಹೆಬ್ಬಳ್ಳಿಗೆ ಕಾರಿನಲ್ಲಿ ಹೋಗ್ತಾಯಿದ್ವಿ, ಸಡನ್ಲಿ ಮಧ್ಯದಲ್ಲಿ ಕಾರ್ ನಿಲ್ಲಿಸಿ ನಿನಗೆ […]

Read more "ಕಾಆಆಆಆಅರ್ ಅನ್ನೋದೆ ಒಂದು ಲಗ್ಜುರಿ ಫೀಲಿಂಗು."

ಅದು ಹೆಂತಾ ಪ್ರೀತಿ..ಆಹಾ ಇಮ್ಯಾಜಿನ್ ದ ಸಿಚುವೇಶನ್…

ದಿನಕ್ಕೊಂದು ಕವಿತೆ” ಅಂತ ವಾಟ್ಸಾಪ್ ಗ್ರೂಪ್ ನ್ಯಾಗ ದಿನಾ ಭಾರಿ ಛಲೋ ಕವಿತೆ ಕಳಸತಿರ್ತಾರ. ನಿನ್ನೆ ವರಕವಿ ಡಾ “ದ ರಾ ಬೇಂದ್ರೆ” ಅವರದು ಕಳಸಿದ್ರು,ಓದಿ ಮುಗಿಸಿದೆ, ಮತ್ತ ಅವರ ಬಗ್ಗೆ ಏನೋ ವಿಚಾರ ಮಾಡ್ಕೋತ ಕೆಲಸಾ ಮಾಡುಮುಂದ ಹೋದ ಸರೆ ನಮ್ಮ ಮನಿಗೆ ಪ್ರೂ ಟಿ ಪಿ ಅಶೋಕ ಸರ್ ಬಂದಿದ್ರು,ಅವರು ಫೇಮಸ್ ವಿಮರ್ಶಕರು ಮತ್ತ ಬರಹಗಾರರು.ಪ್ರತಿ ಸರೆ ಬಂದಾಗ ಊಟಾ ಏಲ್ಲಾ ಆದಮ್ಯಾಲೆ ನಾವೆಲ್ಲಾರು ಸುತ್ತ ಕೂಡತೇವಿ,ಅವರು ನಮಗ ಬ್ಯಾರೆ ಬ್ಯಾರೆ ಕತಿ ಹೇಳತಾರ […]

Read more "ಅದು ಹೆಂತಾ ಪ್ರೀತಿ..ಆಹಾ ಇಮ್ಯಾಜಿನ್ ದ ಸಿಚುವೇಶನ್…"

English is a funny language ಅಂತ,

The legend ಅಮಿತಾಭ್ ಬಚ್ಚನ್ ಅವರದು ಒಂದು dialog ಇತ್ತು, English is a funny language ಅಂತ, ಹಂಗ ನಾವು ಕನ್ನಡ ಮೀಡಿಯಂ ಸಾಲ್ಯಾಗ ಕಲತಾವ್ರು English ಮಾತಾಡೂದು ಅಂದ್ರ ಭಾರಿ ಸಾಹಸದ್ದು ಕೆಲಸಾ, ಮತ್ತ ಭಾಳ ಶೇರತಿತ್ತು.ಶೇರತಿತ್ತ ಏನೋ ಖರೆ ಬರಬೇಕಲಾ ಮಾತಾಡ್ಲಿಕ್ಕೆ…ನನ್ನ ಹಂಗ ನಮ್ಮ್ ಟೋಳೀ…ಸಾಲಿಯಿಂದ LIC founder’s day ಅಂತ ಹಾಡಿನ ಸ್ಪರ್ಧೆಕ್ಕ ಕರಕೊಂಡ ಹೋದರು,ಅಲ್ಲೆ ನೋಡಿದ್ರ ಹುಯ್ಯ ಅಂತ ಬ್ಯಾರೆ ಬ್ಯಾರೆ ಸಾಲಿ ಹುಡಗುರು, ಸಿಕ್ಕಾಪಟ್ಟೆ English ಮಾತಾಡಾವ್ರು,ನಾವು ನೋಡಿದ್ರ […]

Read more "English is a funny language ಅಂತ,"

ನೊ ಮೊಮ್,ಇಟ್ಸ್ ಓ ಕೆ..ಯುವರ ಪ್ಲಾನ್ ಇಸ್ ಇನ್

ನಾಲ್ಕು ಮನಿನೋ? ೬ ಮನಿನೊ? ಒಂಟಿ ನೋ? ಜೋಡಿ ನೋ? ಎರಡನೇ ಮನಿಯಿಂದ ಚಿಮ್ಮೊದೊ? ಮೂರನೇ ಮನಿಯಿಂದ ಚಿಮ್ಮೋದೊ?ಅಂತ ಉರಿ ಉರಿ ಬಿಸಿಲಿನಲ್ಲಿ,ಮಣ್ಣಿನ ನೆಲಕ್ಕೆ ಕೋಲಿನಿಂದ ೪ ಅಕ್ಕಪಕ್ಕ ಮನೆ ಗಿಚೋದೆ ನಮ್ಮ ಕುಂಟಾಪಿಲ್ಲೆ ಆಟ. ನೀಲಿ ಸ್ಲಿಪರ್ ಹಾಕಿಕೂಂಡು ಕೆಲ ಒಬ್ಬರು ಅದರೆ,ಅದೆ ಚಪ್ಪಲಿ ಗೆ ಉಂಗುಷ್ಟ ಕಿತ್ತಿದಲ್ಲಿ ಪಿನ್ನಿನಿಂದ ಜೋಡಿಸಿ ಹಾಕಿಕೊಂಡ ನೆನಪು,ಪ್ಲಾಸ್ಟಿಕ್ ಹೈರ್ ಬ್ಯಾಂಡಿ ಗೆ ಕ್ಲಿಪ್ ಹಾಕಿ ಬಾಡಿದ ಮಲ್ಲಿಗೆ ಹೂವಿನ ಮಾಲೆ,ಚಿಲಿಪಿಲಿ ಹಕ್ಕಿಗಳಂತೆ ಕೆಂಪು,ಹಸಿರು,ನೀಲಿ ಬಣ್ಣಗಳ ಅಂಗಿ.ನೆನೆಸಿಕೂಂಡರೆ ಆಹಾ!ಸ್ವರ್ಗ.. ೮ರಿಂದ […]

Read more "ನೊ ಮೊಮ್,ಇಟ್ಸ್ ಓ ಕೆ..ಯುವರ ಪ್ಲಾನ್ ಇಸ್ ಇನ್"

ಮಹಿಳೆ ಮತ್ತು ಪಾತ್ರ ನಿರ್ವಹಣೆ “ಇನ್ನು ಎರಡು ತಿಂಗಳಿಗೆ ನಿನ್ನ ಮದುವೆ, ರಿಹರ್ಸಲ್ ಅಂತಾ ರಾತ್ರಿವರೆಗೂ ತಿರಗಬೇಡಾ. ಅತ್ತೆ ಮನೆಯವರು ಏನು ಅನ್ಕೊಂಡಾರು? ಅಯ್ಯೋ ಇಡೀ ದಿನಾ ಮನೇಲಿ ಇದ್ರುನೂ ಸಮಯ ಸಾಕಾಗಲ್ಲಾ, ಇನ್ನು ನಾಟಕ ಅದು ಇದು ಅಂತ ಹೇಗೆ ಮಾಡ್ತಿ? ಅಲ್ಲಾ..ನಿಮ್ಮ ಗಂಡ ಏನು ಅನ್ಕೋಳಲ್ವಾ?” ಅಂತಾ ದಿನ ಈ ತರಹದ ಸವಾಲುಗಳನ್ನು ಮೊದಲು ಎದುರಿಸಲು ನನಗೆ ತುಂಬಾನೇ ಕಷ್ಟ ಆಗ್ತಿತ್ತು. ಏನೋ ತಪ್ಪು ಮಾಡ್ತಿದ್ದೀನಾ? ಎಂಬ ಪ್ರಶ್ನೆ ಕಾಡ್ತಿತ್ತು. ಆದರೆ ಇದನ್ನೆಲ್ಲಾ ಎದುರಿಸಿ ನಾಟಕದತ್ತ ಮನ ಒಲಿತಿದೆ ಅಂದರೆ, ಅದರಲ್ಲಿ ಏನೋ ವಿಶೇಷತೆ ಇರಬಹುದಲ್ಲ? ನಾಟಕದಲ್ಲಿ ಬರುವ ಪಾತ್ರಗಳು ನಮ್ಮಲ್ಲಿ ಇರುವ ಪಾತ್ರಗಳೇ. “ಮಹಿಳೆ ಮತ್ತು ನಟನೆ” ಇವೆರಡು ಶಬ್ದಗಳಿಗೆ ತುಂಬಾ ನಂಟಿದೆ. ಮಗು ಹುಟ್ಟಿದ ತಕ್ಷಣವೇ ಯುವತಿಯ ಪಟ್ಟ ಬಿಟ್ಟು,ತಾಯಿಯಾಗಿ ತನ್ನ ಮಗುವನ್ನು ತನ್ನದೇ ಭಾಷೆಯಲ್ಲಿ ಮಾತನಾಡಿಸಲು ಆರಂಭಿಸುತ್ತಾಳೆ. ಯಾವುದೇ ತರಹದ ತರಬೇತಿ ಇಲ್ಲದ ತಾಯಿ-ಸ್ಥಾನದ ಪಾತ್ರ ನಿರ್ವಹಣೆ ಸಹಜವಾಗಿ ಬಂದದ್ದು. ಮಗಳಾಗಿ, ಅಕ್ಕ-ತಂಗಿಯಾಗಿ, ಮಡದಿಯಾಗಿ, ತಾಯಿಯಾಗಿ, ಅಜ್ಜಿಯಾಗಿ ವಿವಿಧ ಹಂತಗಳಲ್ಲಿ ಪಾತ್ರ ಬದಲಾಗುತ್ತಾ ಹೋಗುತ್ತದೆ. ಬಣ್ಣ ಹಚ್ಚಿದ ಮೊದಲ ಸಲ ಕಣ್ಣು ತೆರೆದು ನನ್ನನ್ನು ನಾನು ಕನ್ನಡಿಯಲ್ಲಿ ನೋಡಿದಾಗ ಗುರುತೇ ಸಿಗಲಿಲ್ಲ. ಕೊಂಬೆಗೆ ಸುತ್ತಿದ ಮಂಗನ ಬಾಲದ ಹಾಗೆ ನಿಲ್ಲಿಸಿದ ಜಡೆ, ಸರ್ಕಸ್‍ನಲ್ಲಿ ಜೋಕರ್‍ಗೆ ಬಳಿದ ಹಾಗೆ ಕೆನ್ನೆಯ ಮೇಲೆ ಗುಲಾಬಿ ಬಣ್ಣ, ದೊಡ್ಡ ಕುಂಕುಮ ಮತ್ತು ದೊಡ್ಡ ದೊಡ್ಡ ಹಳದಿ ಹೂವು ಇರುವ ಹಸಿರು ಬಣ್ಣದ ಸೀರೆ.. ಅಬ್ಬಾ! ನಿಜವಾಗಿ ನಾನಿರುವ ವ್ಯಕ್ತಿತ್ವಕ್ಕೆ ವಿರುದ್ಧವಾಗಿರುವ ಪಾತ್ರ ಅದು. ಅಂದು ಡಾ ಚಂದ್ರಶೇಖರ್ ಕಂಬಾರರ “ಸಿರಿ ಸಂಪಿಗೆ”ಯ ಕಮಲಿಯಾಗಿದ್ದೆ. ವೇದಿಕೆಗೆ ಬರುವ ಮೊದಲು ಮನಸ್ಸಿನಲ್ಲಿ ನೂರೆಂಟು ಪ್ರಶ್ನೆಗಳು. ಹೇಗೆ ನಟಿಸ್ತೀನಿ? ಹೇಗೆ ಕಾಣಿಸ್ತೀನಿ? ‘ಜೋರು ಹೆಣ್ಣುಮಗಳು’ ಅಂತಾ ಜನ ಅನುಮಾನಿಸ್ತಾರಾ? ಇತ್ಯಾದಿ. ಆದರೆ, ನಾಟಕ ಶುರು ಆಗಿ ಕೆಲವು ನಿಮಿಷ ಎದೆಬಡಿತ ಜೋರಾಗಿತ್ತು. ಆ ತಾಯಿ ರಂಗಭೂಮಿಗೆ ಒಮ್ಮೆ ನಮಸ್ಕರಿಸಿ, ಎಲ್ಲಾ ನಿನ್ನದೇ ಅಮ್ಮಾ! ಅಂತ ಮನದಾಳದಿಂದ ಪ್ರಾರ್ಥಿಸಿ ವೇದಿಕೆಗೆ ಹೋದೆ. ನಾಟಕ ಮುಗಿದು ಎಲ್ಲರೂ ಬಂದು ಬೆನ್ನು ತಟ್ಟಿ, ಭಲೇ! ಶಭಾಷ್! ಅನ್ನೋವರೆಗೂ ಕಮಲಿ ನನ್ನಬಿಟ್ಟಿರಲಿಲ್ಲ. ಹಿರಿಯ ಮೇಕಪ್ ಕಲಾಕಾರ ದಿ. ಗಜಾನನ ಮಹಾಲೆಯವರು ನಾನಿದ್ದಲ್ಲಿಗೆ ಬಂದು “ನಿನ್ನ ನಟನೆ, ಮುಖದ ಭಾವ ಮತ್ತು ಆ ನಗು ನನಗೆ ಹಿಂದಿನ ಕಲಾವಿದೆಯರ ನೆನಪುಗಳನ್ನು ಮರುಕಳಿಸುವಂತೆ ಮಾಡಿತು. ಕಂದಾ, ತುಂಬಾ ಮುಂದೆ ಹೋಗ್ತಿಯಾ, ಬಿಡಬೇಡಾ ಈ ನಟನೆಯನ್ನಾ” ಅಂತಾ ಕಣ್ಣಲ್ಲಿ ನೀರು ತುಂಬಿ ಹೇಳಿದರು. ಅದನ್ನು ನೆನೆಪಿಸಿಕೊಂಡಾಗ ಅನಿಸಿದ್ದು ಅಂದರೆ “ನನ್ನ ತಾಯಿ ‘ರೇವತಿ’ ಅಂತ ನನಗೆ ಒಮ್ಮೆ ಜನ್ಮ ಕೊಟ್ಟಿದ್ರೆ, ರಂಗಭೂಮಿ ತಾಯಿ ನನಗೆ ಪದೇ ಪದೇ ಜನ್ಮ ಕೊಡ್ತಾಳೆ – ‘ಸಿರಿಸಂಪಿಗೆ’ಯ ಕಮಲಿಯಾಗಿ, ಮೃಚ್ಛಕಟಿಕದ ರದನಿಕೆಯಾಗಿ, ಜಡಭರತನ ಕನಸುಗಳ ಪ್ರಯಾಣಿಕಳಾಗಿ, ಮತ್ತೊಂದರಲ್ಲಿ ಕೆಲಸದವಳಾಗಿ, ಮಗದೊಂದರಲ್ಲಿ ಕುರುಡಿಯಾಗಿ, ವಿಧವೆಯಾಗಿ..” ಹೀಗೆ ಹತ್ತು ಹಲವು ಜನ್ಮಗಳನ್ನು ಜೀವಿಸಿರುವ ಸಿಹಿ ಅನುಭವ. ನಟನೆಯಲ್ಲಿ ನಾನು ನಾನಾಗಿರದೆ, ಇನ್ನೊಂದು ಪಾತ್ರವಾಗಿ ಆ ಪಾತ್ರದ ಕಷ್ಟ-ಸುಖಗಳನ್ನು ಅರಿತುಕೊಂಡು ನಟಿಸುವ ಸಮಯದಲ್ಲಿ ನಮ್ಮೊಳಗೆ ಸಹಜವಾಗಿ ಗಟ್ಟಿತನ ಬರುತ್ತದೆ. ಅಷ್ಟೇ ಅಲ್ಲದೆ ನಿಜಜೀವನದಲ್ಲಿ ಬೇರೊಬ್ಬರ ಕಷ್ಟ-ಸುಖಗಳನ್ನು ಅರಿತುಕೊಳ್ಳುವ ಸಾಮಥ್ರ್ಯ ಮೂಡುತ್ತದೆ. ಇದೆಲ್ಲವನ್ನೂ ಮೀರಿ ಆಗಾಗ ಮನಸ್ಸಿಗೆ – ‘ನಾನು ಮಾಡ್ತಿರೋದು ಸರಿಯಾ?’ ಅನ್ನುವ ಪ್ರಶ್ನೆ ಕಾಡುತ್ತೆ. ಪರಿವಾರಕ್ಕೆ ಸಮಯ ಕೊಡದೆ, ಮನೆಕೆಲಸ ಸರಿ ಮಾಡಿದ್ರೂ ಕೂಡ ಸಮಾಧಾನ ಇಲ್ಲದೇ ಅದೊಂದೇ ಪ್ರಶ್ನೆ ಮನಸಿನಲ್ಲಿ ಸದಾ ಕೊರೆಯುತ್ತೆ. ಆದರೆ ರಂಗಭೂಮಿಯಲ್ಲಿ ಅದೇನೋ ವಿಚಿತ್ರವಾದ ಶಕ್ತಿ ಇದೆ. ಆ ಪ್ರಶ್ನೆಗೆ ಉತ್ತರಿಸುವ ತಾಕತ್ತು ಕೂಡ ಆ ಶಕ್ತಿಗಿದೆ ಎಂಬುದು ನನಗೆ ಮನದಟ್ಟಾಗಿದೆ. ಅದು ನಮ್ಮಲ್ಲಿನ ಧೈರ್ಯ, ಸ್ಥಿರತೆ, ಸಹನಾಶಕ್ತಿ ಇಮ್ಮಡಿಸಿ ನಮ್ಮನ್ನು ಮನದ ಆಳದಿಂದಲೇ ಗಟ್ಟಿ ಮಾಡುತ್ತದೆ. ಸಾಮಾನ್ಯವಾಗಿ ಯಾವುದೇ ಕಲೆಗೆ ಅದರದೇ ಆದ ವಿಶೇಷ ಗೌರವವಿರುತ್ತದೆ. ನಾಟಕದಲ್ಲಿ ಬರೀ ನಟನೆ ಅಲ್ಲದೆ, ಹಲವು ಬಗೆಯ ಕಲೆಗಳನ್ನು ಕಲಿಯಲು ಅವಕಾಶವಿರುತ್ತದೆ. ಓದು, ಬರಹ, ವೇಷಭೂಷಣ, ಬೆಳಕು, ನೃತ್ಯ, ಸಂಗೀತ, ಧ್ವನಿ, ಉಚ್ಛಾರಣೆ, ಹಾವಭಾವ ಇತ್ಯಾದಿಗಳು ಒಂದು ನಾಟಕ ಕಟ್ಟುವಾಗ ಬರುವಂತಹ ಸಹಜಕಲೆಗಳು. ಜೀವನದ ಬಂಡಿಯ ಸರಾಗವಾಗಿ ಸಾಗಿಸಲು ರಂಗಭೂಮಿ ಸಹಾಯ ಮಾಡುತ್ತದೆ ಎಂದರೆ ಅತಿಶಯೋಕ್ತಿಯಾಗದು. ಲಿಂಗತಾರತಮ್ಯವನ್ನು ಲೆಕ್ಕಿಸದೇ ನಮ್ಮಲ್ಲಿರುವ ಕಲೆಯ ಆಸ್ಥೆಯನ್ನು ಮುಂದುವರಿಸೋಣ.

Read more "ಮಹಿಳೆ ಮತ್ತು ಪಾತ್ರ ನಿರ್ವಹಣೆ “ಇನ್ನು ಎರಡು ತಿಂಗಳಿಗೆ ನಿನ್ನ ಮದುವೆ, ರಿಹರ್ಸಲ್ ಅಂತಾ ರಾತ್ರಿವರೆಗೂ ತಿರಗಬೇಡಾ. ಅತ್ತೆ ಮನೆಯವರು ಏನು ಅನ್ಕೊಂಡಾರು? ಅಯ್ಯೋ ಇಡೀ ದಿನಾ ಮನೇಲಿ ಇದ್ರುನೂ ಸಮಯ ಸಾಕಾಗಲ್ಲಾ, ಇನ್ನು ನಾಟಕ ಅದು ಇದು ಅಂತ ಹೇಗೆ ಮಾಡ್ತಿ? ಅಲ್ಲಾ..ನಿಮ್ಮ ಗಂಡ ಏನು ಅನ್ಕೋಳಲ್ವಾ?” ಅಂತಾ ದಿನ ಈ ತರಹದ ಸವಾಲುಗಳನ್ನು ಮೊದಲು ಎದುರಿಸಲು ನನಗೆ ತುಂಬಾನೇ ಕಷ್ಟ ಆಗ್ತಿತ್ತು. ಏನೋ ತಪ್ಪು ಮಾಡ್ತಿದ್ದೀನಾ? ಎಂಬ ಪ್ರಶ್ನೆ ಕಾಡ್ತಿತ್ತು. ಆದರೆ ಇದನ್ನೆಲ್ಲಾ ಎದುರಿಸಿ ನಾಟಕದತ್ತ ಮನ ಒಲಿತಿದೆ ಅಂದರೆ, ಅದರಲ್ಲಿ ಏನೋ ವಿಶೇಷತೆ ಇರಬಹುದಲ್ಲ? ನಾಟಕದಲ್ಲಿ ಬರುವ ಪಾತ್ರಗಳು ನಮ್ಮಲ್ಲಿ ಇರುವ ಪಾತ್ರಗಳೇ. “ಮಹಿಳೆ ಮತ್ತು ನಟನೆ” ಇವೆರಡು ಶಬ್ದಗಳಿಗೆ ತುಂಬಾ ನಂಟಿದೆ. ಮಗು ಹುಟ್ಟಿದ ತಕ್ಷಣವೇ ಯುವತಿಯ ಪಟ್ಟ ಬಿಟ್ಟು,ತಾಯಿಯಾಗಿ ತನ್ನ ಮಗುವನ್ನು ತನ್ನದೇ ಭಾಷೆಯಲ್ಲಿ ಮಾತನಾಡಿಸಲು ಆರಂಭಿಸುತ್ತಾಳೆ. ಯಾವುದೇ ತರಹದ ತರಬೇತಿ ಇಲ್ಲದ ತಾಯಿ-ಸ್ಥಾನದ ಪಾತ್ರ ನಿರ್ವಹಣೆ ಸಹಜವಾಗಿ ಬಂದದ್ದು. ಮಗಳಾಗಿ, ಅಕ್ಕ-ತಂಗಿಯಾಗಿ, ಮಡದಿಯಾಗಿ, ತಾಯಿಯಾಗಿ, ಅಜ್ಜಿಯಾಗಿ ವಿವಿಧ ಹಂತಗಳಲ್ಲಿ ಪಾತ್ರ ಬದಲಾಗುತ್ತಾ ಹೋಗುತ್ತದೆ. ಬಣ್ಣ ಹಚ್ಚಿದ ಮೊದಲ ಸಲ ಕಣ್ಣು ತೆರೆದು ನನ್ನನ್ನು ನಾನು ಕನ್ನಡಿಯಲ್ಲಿ ನೋಡಿದಾಗ ಗುರುತೇ ಸಿಗಲಿಲ್ಲ. ಕೊಂಬೆಗೆ ಸುತ್ತಿದ ಮಂಗನ ಬಾಲದ ಹಾಗೆ ನಿಲ್ಲಿಸಿದ ಜಡೆ, ಸರ್ಕಸ್‍ನಲ್ಲಿ ಜೋಕರ್‍ಗೆ ಬಳಿದ ಹಾಗೆ ಕೆನ್ನೆಯ ಮೇಲೆ ಗುಲಾಬಿ ಬಣ್ಣ, ದೊಡ್ಡ ಕುಂಕುಮ ಮತ್ತು ದೊಡ್ಡ ದೊಡ್ಡ ಹಳದಿ ಹೂವು ಇರುವ ಹಸಿರು ಬಣ್ಣದ ಸೀರೆ.. ಅಬ್ಬಾ! ನಿಜವಾಗಿ ನಾನಿರುವ ವ್ಯಕ್ತಿತ್ವಕ್ಕೆ ವಿರುದ್ಧವಾಗಿರುವ ಪಾತ್ರ ಅದು. ಅಂದು ಡಾ ಚಂದ್ರಶೇಖರ್ ಕಂಬಾರರ “ಸಿರಿ ಸಂಪಿಗೆ”ಯ ಕಮಲಿಯಾಗಿದ್ದೆ. ವೇದಿಕೆಗೆ ಬರುವ ಮೊದಲು ಮನಸ್ಸಿನಲ್ಲಿ ನೂರೆಂಟು ಪ್ರಶ್ನೆಗಳು. ಹೇಗೆ ನಟಿಸ್ತೀನಿ? ಹೇಗೆ ಕಾಣಿಸ್ತೀನಿ? ‘ಜೋರು ಹೆಣ್ಣುಮಗಳು’ ಅಂತಾ ಜನ ಅನುಮಾನಿಸ್ತಾರಾ? ಇತ್ಯಾದಿ. ಆದರೆ, ನಾಟಕ ಶುರು ಆಗಿ ಕೆಲವು ನಿಮಿಷ ಎದೆಬಡಿತ ಜೋರಾಗಿತ್ತು. ಆ ತಾಯಿ ರಂಗಭೂಮಿಗೆ ಒಮ್ಮೆ ನಮಸ್ಕರಿಸಿ, ಎಲ್ಲಾ ನಿನ್ನದೇ ಅಮ್ಮಾ! ಅಂತ ಮನದಾಳದಿಂದ ಪ್ರಾರ್ಥಿಸಿ ವೇದಿಕೆಗೆ ಹೋದೆ. ನಾಟಕ ಮುಗಿದು ಎಲ್ಲರೂ ಬಂದು ಬೆನ್ನು ತಟ್ಟಿ, ಭಲೇ! ಶಭಾಷ್! ಅನ್ನೋವರೆಗೂ ಕಮಲಿ ನನ್ನಬಿಟ್ಟಿರಲಿಲ್ಲ. ಹಿರಿಯ ಮೇಕಪ್ ಕಲಾಕಾರ ದಿ. ಗಜಾನನ ಮಹಾಲೆಯವರು ನಾನಿದ್ದಲ್ಲಿಗೆ ಬಂದು “ನಿನ್ನ ನಟನೆ, ಮುಖದ ಭಾವ ಮತ್ತು ಆ ನಗು ನನಗೆ ಹಿಂದಿನ ಕಲಾವಿದೆಯರ ನೆನಪುಗಳನ್ನು ಮರುಕಳಿಸುವಂತೆ ಮಾಡಿತು. ಕಂದಾ, ತುಂಬಾ ಮುಂದೆ ಹೋಗ್ತಿಯಾ, ಬಿಡಬೇಡಾ ಈ ನಟನೆಯನ್ನಾ” ಅಂತಾ ಕಣ್ಣಲ್ಲಿ ನೀರು ತುಂಬಿ ಹೇಳಿದರು. ಅದನ್ನು ನೆನೆಪಿಸಿಕೊಂಡಾಗ ಅನಿಸಿದ್ದು ಅಂದರೆ “ನನ್ನ ತಾಯಿ ‘ರೇವತಿ’ ಅಂತ ನನಗೆ ಒಮ್ಮೆ ಜನ್ಮ ಕೊಟ್ಟಿದ್ರೆ, ರಂಗಭೂಮಿ ತಾಯಿ ನನಗೆ ಪದೇ ಪದೇ ಜನ್ಮ ಕೊಡ್ತಾಳೆ – ‘ಸಿರಿಸಂಪಿಗೆ’ಯ ಕಮಲಿಯಾಗಿ, ಮೃಚ್ಛಕಟಿಕದ ರದನಿಕೆಯಾಗಿ, ಜಡಭರತನ ಕನಸುಗಳ ಪ್ರಯಾಣಿಕಳಾಗಿ, ಮತ್ತೊಂದರಲ್ಲಿ ಕೆಲಸದವಳಾಗಿ, ಮಗದೊಂದರಲ್ಲಿ ಕುರುಡಿಯಾಗಿ, ವಿಧವೆಯಾಗಿ..” ಹೀಗೆ ಹತ್ತು ಹಲವು ಜನ್ಮಗಳನ್ನು ಜೀವಿಸಿರುವ ಸಿಹಿ ಅನುಭವ. ನಟನೆಯಲ್ಲಿ ನಾನು ನಾನಾಗಿರದೆ, ಇನ್ನೊಂದು ಪಾತ್ರವಾಗಿ ಆ ಪಾತ್ರದ ಕಷ್ಟ-ಸುಖಗಳನ್ನು ಅರಿತುಕೊಂಡು ನಟಿಸುವ ಸಮಯದಲ್ಲಿ ನಮ್ಮೊಳಗೆ ಸಹಜವಾಗಿ ಗಟ್ಟಿತನ ಬರುತ್ತದೆ. ಅಷ್ಟೇ ಅಲ್ಲದೆ ನಿಜಜೀವನದಲ್ಲಿ ಬೇರೊಬ್ಬರ ಕಷ್ಟ-ಸುಖಗಳನ್ನು ಅರಿತುಕೊಳ್ಳುವ ಸಾಮಥ್ರ್ಯ ಮೂಡುತ್ತದೆ. ಇದೆಲ್ಲವನ್ನೂ ಮೀರಿ ಆಗಾಗ ಮನಸ್ಸಿಗೆ – ‘ನಾನು ಮಾಡ್ತಿರೋದು ಸರಿಯಾ?’ ಅನ್ನುವ ಪ್ರಶ್ನೆ ಕಾಡುತ್ತೆ. ಪರಿವಾರಕ್ಕೆ ಸಮಯ ಕೊಡದೆ, ಮನೆಕೆಲಸ ಸರಿ ಮಾಡಿದ್ರೂ ಕೂಡ ಸಮಾಧಾನ ಇಲ್ಲದೇ ಅದೊಂದೇ ಪ್ರಶ್ನೆ ಮನಸಿನಲ್ಲಿ ಸದಾ ಕೊರೆಯುತ್ತೆ. ಆದರೆ ರಂಗಭೂಮಿಯಲ್ಲಿ ಅದೇನೋ ವಿಚಿತ್ರವಾದ ಶಕ್ತಿ ಇದೆ. ಆ ಪ್ರಶ್ನೆಗೆ ಉತ್ತರಿಸುವ ತಾಕತ್ತು ಕೂಡ ಆ ಶಕ್ತಿಗಿದೆ ಎಂಬುದು ನನಗೆ ಮನದಟ್ಟಾಗಿದೆ. ಅದು ನಮ್ಮಲ್ಲಿನ ಧೈರ್ಯ, ಸ್ಥಿರತೆ, ಸಹನಾಶಕ್ತಿ ಇಮ್ಮಡಿಸಿ ನಮ್ಮನ್ನು ಮನದ ಆಳದಿಂದಲೇ ಗಟ್ಟಿ ಮಾಡುತ್ತದೆ. ಸಾಮಾನ್ಯವಾಗಿ ಯಾವುದೇ ಕಲೆಗೆ ಅದರದೇ ಆದ ವಿಶೇಷ ಗೌರವವಿರುತ್ತದೆ. ನಾಟಕದಲ್ಲಿ ಬರೀ ನಟನೆ ಅಲ್ಲದೆ, ಹಲವು ಬಗೆಯ ಕಲೆಗಳನ್ನು ಕಲಿಯಲು ಅವಕಾಶವಿರುತ್ತದೆ. ಓದು, ಬರಹ, ವೇಷಭೂಷಣ, ಬೆಳಕು, ನೃತ್ಯ, ಸಂಗೀತ, ಧ್ವನಿ, ಉಚ್ಛಾರಣೆ, ಹಾವಭಾವ ಇತ್ಯಾದಿಗಳು ಒಂದು ನಾಟಕ ಕಟ್ಟುವಾಗ ಬರುವಂತಹ ಸಹಜಕಲೆಗಳು. ಜೀವನದ ಬಂಡಿಯ ಸರಾಗವಾಗಿ ಸಾಗಿಸಲು ರಂಗಭೂಮಿ ಸಹಾಯ ಮಾಡುತ್ತದೆ ಎಂದರೆ ಅತಿಶಯೋಕ್ತಿಯಾಗದು. ಲಿಂಗತಾರತಮ್ಯವನ್ನು ಲೆಕ್ಕಿಸದೇ ನಮ್ಮಲ್ಲಿರುವ ಕಲೆಯ ಆಸ್ಥೆಯನ್ನು ಮುಂದುವರಿಸೋಣ."

Areca Tea…

“ಬೀಯಿಂಗ್ ಸೊಶಿಯಲ್” ಒತ್ತಿಯಿಂದ “ಹೆಜ್ಜೆಗುರುತು” ಅಂತ ಭಾರಿ ಮಸ್ತ ಕಾರ್ಯಕ್ರಮ ನಡಿತದ ..ಈ ಸರೆದ್ದು 5ನೇ ಸಂಚಿಕೆ ಇತ್ತು. “ನೀವೆದನ್ ನೆಂಪೆ” ಅಂತ ಅಡಕಿ ಚಾ ಕಂಡ ಹಿಡದಾವ್ರು..ಭಾರಿ ಖುಶಿ ಆತು ಅವರನ್ನ ನೋಡಿ,ಮಾತಾಡಿಸಿ,ಕಷ್ಟ ಪಟ್ಟು ಕಲತು ಆಸ್ಟ್ರೇಲಿಯಾದಾಗ ಚಲೋ ಕೆಲಸದಾಗ ಇದ್ದಾವ್ರು ..ಒಮ್ಮೆ ಅಡಿಕಿ ಬೆಳೆಗಾರರಿಗೆ ಆತಂಕ ಅದ ಅಂತ ಗೊತ್ತಾಗಿ ಇದ್ದ ಕೆಲಸಾ ಬಿಟ್ಟು ಹುಟ್ಟಿದ ಮಣ್ಣಿಗೆ ಸ್ವಲ್ಪರೇ ಕೆಲಸಾ ಮಾಡೊಣು ಅಂತ ವಾಪಸ ಭಾರತಕ್ಕ ಬಂದು ಭಾಳ ಏನೇನೂ ಪ್ರಯತ್ನ ಮಾಡಿ ಕಡಿಕ […]

Read more "Areca Tea…"

ವಿಮಾನದ ಬಗ್ಗೆ ಇದ್ದ ಕಲ್ಪನಾ

ನೀ ಆದರ ಜೈಪುರ್ ಕ್ಕ ವಿಮಾನದ್ಲೆ ಹೋದಿ..ನಂಗ ಆದರ ಇನ್ನು ಕರಕೂಂಡ ಹೋಗಿಲ್ಲಲಾ ಅಮ್ಮಾ?ಭಾಳ ಕೆಟ್ಟ ಇದ್ದಿ” ಅಂತ ನಮ್ಮ ಪೂರಿ ಅಂದರ ನನ್ನ ಮಗಳು,ಮಂಗಳವಾರ ಸಂತ್ಯಾಗ ಮಾಡತಾರಲಾ ಹಂಗ ಝಗಳಾ ತಗದ್ಲು..ಆತು ಬಿಡು ಅಳಬ್ಯಾಡಾ ಅಪ್ಪಿ,ಬೆಂಗಳೂರಿಗೆ ಹೂಗೊಮುಂದ ವಿಮಾನದಾಗ್ ಹೋಗೂಣು ಮುಂದಿನ ವಾರಾ ಅಂತ ಸಮಧಾನಾ ಮಾಡಿದೆ.ಪಾಪ ಅಂತ್ ಟಿಕೆಟ್ ಬುಕ್ ಮಾಡ್ಲಿಕತ್ತಿದ್ದೆ ಖರೆ ಯಾಕೋ ನಂಗ ಬ್ಯಾಡಾ ಅನಸ್ತು..ವಿಚಾರ ಮಾಡಿದೆ..ನಾನು ಮೊದಲನೇ ಸರೆ ವಿಮಾನ ಹತ್ತಿದ್ದು ಮೊನ್ನೆ ಮೊನ್ನೆ..೨೫ ವರಶದ ತನಕಾ ನಂಗ, ಆ […]

Read more "ವಿಮಾನದ ಬಗ್ಗೆ ಇದ್ದ ಕಲ್ಪನಾ"

ಅಸಹೋತು ಲಾಲಖಿ ನಾರುಳಿಗೆಪ್ಪಾ ಡುಡ್ಡುರು

ಹೆಬ್ಬಳ್ಳಿ ನಮ್ಮ್ ಊರು,ಧಾರವಾಡದಿಂದ ೧೩ ಕಿ ಮಿ ದೊರದಾಗಿರೊ well planned ಹಳ್ಳಿ..ಕುರುಬರ ಓಣಿ,ಸಾದರ ಓಣಿ,ಕಮತರ ಓಣಿ,ಸುಣಗಾರ ಓಣಿ ಅಂತ ಅವರವರ ಉದ್ಯೋಗದ ಪ್ರಕಾರ ಇರತಾರ್.ನಾವೆಲ್ಲಾ ಧಾರವಾಡ ಸಾಲಿಗೆ ಹೋಗತಿದ್ವಿ.೧೦ ಕ್ಕ ಸಾಲಿ ಶುರು ಆಗತಿತ್ತು ಅಂದ್ರ ನಾವು ೮;೪೫ ಕ್ಕ ಮನಿ ಬಿಡಬೇಕಾಗ್ತಿತ್ತು ಬಸ್ ನ್ಯಾಗ ಮಸ್ತ ಧಾಂದಲೇ ಹಾಕೋದು,ಯಾರಿಗೆ ಕೊಡಲಿಕ್ಕೆ ಜಾಗಾ ಸಿಗತದೋ ಅವರದು ಫಜಿತಿ,ಎಲ್ಲಾ ಹುಡಗುರು ಪಾಟಿಚೀಲಾ ಅವರ ಮ್ಯಾಲೆ ಧಪ್ ಧಪ್ ಒಗದ ಅವರನ್ನ ಮುಳಗಿಶೇ ಬಿಡೊದು.ನಾವೆಲ್ಲಾ ಬರೆ ಕತ್ತಿ ಕಾರಬಾರಾ […]

Read more "ಅಸಹೋತು ಲಾಲಖಿ ನಾರುಳಿಗೆಪ್ಪಾ ಡುಡ್ಡುರು"

“ಅಕ್ಕಾ”ಬೇಕು

ನಾನು ಸಣ್ಣಾಕಿದ್ದಾಗ ಅಮ್ಮಾ ನನ್ನ ಹತ್ರ ಬಂದು ನಿನಗ ತಂಗಿ ಬೇಕಾ,ತಮ್ಮಾ ಬೇಕಾ ಅಂತ ಕೇಳಿದಾಗ,ನಂಗ ಇಬ್ಬರು ಬ್ಯಾಡಾ “ಅಕ್ಕಾ”ಬೇಕು ಅಂದೆ,ಅದಕ್ಕ ಅಕಿ “ಅಯ್ಯ ಹುಚ್ಚು ಹುಡುಗಿ ನೀನು ದೊಡ್ಡಾಕಿ,ನೀನೆ ಅಕ್ಕಾ ಇನ್ನ ಬರಾವ್ರು ನಿನ್ನಕಿಂತಾ ಸಣ್ಣಾವ್ರು” ಅಂತ ತಲಿಗೆ ಒಂದು ಪೆಟ್ಟುಕೊಟ್ಟು ನಕ್ಕೋತ ಹೋದಳು,ಮುಂದ ಸ್ವಲ್ಪ ದಿನಕ್ಕ ನನಗ ತಂಗಿ ಹುಟ್ಟಿದ್ಲು,ಬೆಕ್ಕಿನ ಹಂಗ ಕಣ್ಣು,ಗುಂಡ ಮುಖಾ,ಕೆಂಪು ಬಣ್ಣಾ,ಅಗದಿ ಛಂದ ಕೂಸು,..mostly ನಂಗ ಅಕ್ಕಾ ಬೇಕು ಅಂದದ್ದು ಅಶ್ವಿನಿ ದೇವತೆಗಳು ಕೇಳಶ್ಕೊಂಡು “ತಥಾಸ್ತು” ಅಂದಿದ್ರೊ ಏನೋ,೯ ವರ್ಷ […]

Read more "“ಅಕ್ಕಾ”ಬೇಕು"