“ಗೋಲ್ಡನ ಡೇಯ್ಸ್ ಆಫ಼್ ಮಾಯ್ ಲೈಫ಼್”

ಇವತ್ತು ಅರ್ಧ ದಿನ ಶಾಲೆ ಮುಗಿಸಿ ನನ್ನ ಮಗಳು ಬಂದು ತನ್ನ ಬಟ್ಟು ತೋರಿಸಿ “ಅಮ್ಮ ನಮ್ಮ ಶಾಲೆಲಿ ಎಲೆಕ್ಷನ್ ಇತ್ತು, ನಾನೂ ವೊಟ್ ಹಾಕಿದೆ ಅದು ವೋಟರ್ ಕಾರ್ಡ್ ಇಲ್ಲದೇ! ಅದಕ್ಕೆ ನನ್ನ ಫ಼ಿಂಗರಿಗೆ ಮಾರ್ಕ್ ಹಾಕಿದಾರೆ” ಅಂತ ಭಾರಿ ಹುರುಪಿನಿಂದ ಬಂದು ಹೇಳಿದಳು. ನನಗೆ ನಾನು 10ನೇ ತರಗತಿಯಲ್ಲಿದ್ದಾಗಿನ ಚುನಾವಣೆ ನೆನಪಾಯಿತು.

ಸತ್ವಶೀಲಾದೇವಿ ಹೆಣ್ಣು ಮಕ್ಕಳ ಶಾಲೆ ಅಥಣಿ. 8ನೇ ತರಗತಿ ವರೆಗೂ ಧಾರವಾಡದ ಕ ನಾ ಕ ಬಾಲಿಕೆಯರ ಶಾಲೆಯಲ್ಲಿದ್ದೆ, ಅನಾರೋಗ್ಯದ ಕಾರಣ ಹೆಬ್ಬಳ್ಳಿಯಿಂದ ದಿನಾ ಧಾರವಾಡಕ್ಕೆ ಹೋಗಿ ಬರುವುದು ಕಷ್ಟವಾಗ್ತಿತ್ತು. ಅದಕ್ಕೆ ದೊಡ್ಡಮ್ಮನ ಮನೇಲಿ ಇದ್ದೆ 2 ವರ್ಷ. “ಗೋಲ್ಡನ ಡೇಯ್ಸ್ ಆಫ಼್ ಮಾಯ್ ಲೈಫ಼್”

ಜಿ ಎಸ್ (ಜನರಲ್ ಸೆಕ್ರೆಟರಿ ) ಗಿ. ಎಸ್ ಅಂತ ತಲಿಮ್ಯಾಲೆ ಹಾಕೋಬ್ಯಾಡಾ, ಓದಲಿ ಅಂತ ನಿಮ್ಮ ಅಮ್ಮಾ ಇಲ್ಲೇ ಕಳಸ್ಯಾಳ,ಚಂದಗಿ ಅಭ್ಯಾಸಾ ಮಾಡು ಗೌರಿ ಅಂತ ನನ್ನ ದೊಡ್ಡಮ್ಮಾ, ಬಾಬಾ (ದೊಡ್ಡಪ್ಪ) ಮೊದಲೆ ಕರಾರು ಮಾಡಿದ್ರು, ನನಗೂ ಏನು ಆಸಕ್ತಿ ಇರಲಿಲ್ಲ ಅಂತ ನಾನು ಹೆಸರು ನೋಂದಾಯಿಸ್ಲಿಲ್ಲ, ಶಾಲೆಯಲ್ಲಿ ಎಲ್ಲ್ರರಿಗೂ ಆಚ್ಛರ್ಯ.. ನೀನು ಚುನಾವಣೆಗೆ ನಿಲ್ಲಲೆ ಬೇಕು ಇಲ್ಲಾ ಅಂದ್ರೆ ನಾವ್ಯಾರು ನಿನ್ನ ಜೊತೆ ಮಾತಾಡುವದಿಲ್ಲ ಅಂತ ಗೆಳತಿಯರು ಜಗಳಾ ಮಾಡಿದ್ರು, ಎರಡು ದಿನಾ ಕಳೆದ ಮೇಲೆ ಸರಿ ಆಗ್ತಾರೆ ಅಂತ ಸುಮ್ನಾದೆ..ಹೆಸರು ಕೂಡಲು ನಿರ್ಧರಿಸಿದ ಸಮಯ ಮುಗಿಯಿತು..ಅಬ್ಬಾ ಅನ್ಕೋಂಡು ಪಾಟಿಚೀಲಾ ಕಟ್ಟುತ್ತಿದ್ದೆ, ಅಷ್ಟರಲ್ಲಿ ಪ್ರಿನ್ಸಿಪಾಲರ ಕರೆ..ಹೋದೆ ಅಲ್ಲಾ ನಾಡಗೀರ ನಾಳೆ ತನಕ ಸಮಯ ಇದೆ, ಏನೋ ಕಾರಣಕ್ಕೆ ಹೆಚ್ಚಿನ ಸಮಯ ಕೊಡತಿದಿನಿ..ನಿನ್ನ ನಿರ್ಧಾರ ತಿಳಿಸು ಅಂತ ಹೇಳಿದರು.

ರಾತ್ರಿ ಎಲ್ಲಾ ನಿದ್ದೆ ಇಲ್ಲಾ..ಟೆನಷನ್..ದೊಡ್ಡಮ್ಮನ ಹತ್ತಿರ ಹೇಳೊಕು ಭಯ, ಅಂತು ಬೇಡವೇ ಬೇಡ ಅಂತ ಹೇಳಿಯೆ ಬಿಡೋಣ ಅಂತ ಮರುದಿನ ಶಾಲೆಗೆ ಹೋದ್ರೆ ಪಟ್ಟಿ ಹಚ್ಚಿ ಆಗಿತ್ತು. ನನ್ನ ಹೆಸರು ಮತ್ತೆ ನನ್ನ ಜೂನಿಯರ್ ನನ್ನ ವಿರುಧ..ಏನು ಗೊತ್ತಾಗ್ತಾ ಇಲ್ಲಾ ನನಗೆ,,ಜೂನಿಯರ್ ಯಾಕೆ? ನನ್ನ ಹೆಸರು ಏನು ಇದೆಲ್ಲಾ ಅಂದರೆ ಒಬ್ಬರು ಉತ್ತರ ಕೊಡಲಿಲ್ಲ.ನನ್ನ ವಿರುದ್ಧ ನನ್ನ ವರ್ಗದವರು ಯಾರು ತಯಾರ್ ಇರಲಿಲ್ಲ..ಅಬ್ಬಾ ಅಂತು ಮಧಾನ್ಹ ಮತ ಚಲಾವಣೆ ನಡೆಯಿತು..ಮತ ಎಣಿಕೆಗೆ ನಮ್ಮನ್ನು ಕರೆದಿದ್ದರು..ಒಟ್ಟು ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 500 ಅದರಲ್ಲಿ 495 ಮತ ನನಗೆ, 1 ಅವಳದ್ದು, ಇನ್ನೂಂದು ಅವಳ ಗೆಳತಿ ಮತ್ತೆ ನಾನು ಹಾಕಿರುವ ಮತ ಸೇರಿ ಒಟ್ಟು ಮೂರು ಮತ ಅವಳಿಗೆ..ಮನೆಗೆ ಹೋಗಿ ವಿಷಯ ತಿಳಿಸಿದೆ..ನನ್ನ ದೊಡ್ಡಮ್ಮನಿಗೆ ನನ್ನ ಗೆಳತಿಯರ ಪ್ರೀತಿ ನೋಡಿ ಖುಷಿಯಾಯ್ತು. ಮರುದಿನ ಸಿಹಿ ತಿಂಡಿ ಕೋಡೊಣ ಎಲ್ಲರಿಗೊ ಅಂತ ತಗೆದುಕೊಂಡು ಹೋದರೆ, ನನಗಿಂತ ಮೊದಲು 9ನೇ ತರಗತಿ ರೂಪಾ ಎಂಬ ವಿದ್ಯಾರ್ಥಿನಿ ಸಿಹಿ ಹಂಚುತ್ತಿದ್ದಳು,ನಾನು ಗೆದ್ದ ಸಂತೋಷಕ್ಕೆ..ಎಂತಹ ಪ್ರೀತಿ, ವಿಶ್ವಾಸ,ನಂಬಿಕೆ ..ಅಬ್ಬಾ ಎಂದಿಗೊ ಮರೆಯದ ದಿನಗಳು..

 

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s