ಅದು ಹೆಂತಾ ಪ್ರೀತಿ..ಆಹಾ ಇಮ್ಯಾಜಿನ್ ದ ಸಿಚುವೇಶನ್…

ದಿನಕ್ಕೊಂದು ಕವಿತೆ” ಅಂತ ವಾಟ್ಸಾಪ್ ಗ್ರೂಪ್ ನ್ಯಾಗ ದಿನಾ ಭಾರಿ ಛಲೋ ಕವಿತೆ ಕಳಸತಿರ್ತಾರ. ನಿನ್ನೆ ವರಕವಿ ಡಾ “ದ ರಾ ಬೇಂದ್ರೆ” ಅವರದು ಕಳಸಿದ್ರು,ಓದಿ ಮುಗಿಸಿದೆ, ಮತ್ತ ಅವರ ಬಗ್ಗೆ ಏನೋ ವಿಚಾರ ಮಾಡ್ಕೋತ ಕೆಲಸಾ ಮಾಡುಮುಂದ ಹೋದ ಸರೆ ನಮ್ಮ ಮನಿಗೆ ಪ್ರೂ ಟಿ ಪಿ ಅಶೋಕ ಸರ್ ಬಂದಿದ್ರು,ಅವರು ಫೇಮಸ್ ವಿಮರ್ಶಕರು ಮತ್ತ ಬರಹಗಾರರು.ಪ್ರತಿ ಸರೆ ಬಂದಾಗ ಊಟಾ ಏಲ್ಲಾ ಆದಮ್ಯಾಲೆ ನಾವೆಲ್ಲಾರು ಸುತ್ತ ಕೂಡತೇವಿ,ಅವರು ನಮಗ ಬ್ಯಾರೆ ಬ್ಯಾರೆ ಕತಿ ಹೇಳತಾರ ಅದು ನೆನಪಾತು..ಒಮ್ಮೆ ಬಂದಾಗ ಅವರು ನಮ್ಮ ಡಾ ದ ರಾ ಬೇಂದ್ರೆ ಅವರ ಕತಿ ಹೇಳಿಕತ್ತಿದ್ರು. “ಉಡುಪಿಗೆ ಮ್ಯಾಲಿಂದ ಮ್ಯಾಲೆ ಬೇಂದ್ರೆ ಅವರು ಸಾಹಿತ್ಯಕ್ಕ ಸಂಭಂದಿಸಿದ ಹಂತಾ ಕಾರ್ಯಕ್ರಮಕ್ಕ ಬರತಿದ್ರಂತ,ಖರೆ ನಮ್ಮ ಕಡೆ ಉಡುಪಿ ಅಂದ ಕೂಡಲೆ ತಲ್ಯಾಗ ಬರೊದು ಕೃಷ್ಣನಗುಡಿ, ಅದಕ್ಕ ಪಾಪ ಬೇಂದ್ರೆ ಅವರ ಹೆಂಡತಿಯವರಿಗೆ ಆಶಾ ಆಗತಿತ್ತ ಅಂತ, ಉಡುಪಿಗೆ ಬರೋದು,ಖರೆ ಇವರ ಜೋಡಿ ಯಾವಾಗ್ಲು ಗುಂಪು ಗುಂಪು ಮಂದಿ ಇರೊದ್ರಿಂದ, ಎಂದು ಸಾಧ್ಯ ಆಗಿದಿಲ್ಲಾ ಅಂತ.ಆ ವಿಷಯಾ ಬೇಂದ್ರೆಯವರಿಗು ಗೂತ್ತಿತ್ತು,ಮತ್ತ ಯಾವಾಗರೆ ಆದಾಗ ಕೃಷ್ಣಗುಡಿಗೆ ಕರಕೂಂಡು ಹೋಗಬೇಕು ಅಂತನು ತಲ್ಯಾಗೆ ಇತ್ತಂತ.ಖರೆ ವಟ್ಟ ಆಗಲಿಲ್ಲಾ ಮುಂದ ಅವರು ತೀರಕೋಂಡ ಬಿಟ್ರಂತ.ಸ್ವಲ್ಪ ದಿನಾ ಆತು,ಮತ್ತ ಉಡುಪಿಗೆ ಹೋಗೋ ಪ್ರಸಂಗ ಬಂದಾಗ,ಗಾಡಿ ನಿಲ್ಲಿಸಿ ಮನಿ ವಳಗ ಹೋಗಿ ಏನೋ ತಗೊಂಡ ಬಂದು, ಮುಂದ ಉಡುಪಿ ಮುಟ್ಟಿದ್ರಂತ.ಮರುದಿನಾ ತಮ್ಮ ಕೆಲವು ಗೆಳ್ಯಾರ ಜೋಡಿ ದರ್ಶನಕ್ಕ ಹೋಗಿ ತಮ್ಮ ಹೆಂಡತಿ ಚಸ್ಮಾ ಹಾಕೋಂಡ ಕೃಷ್ಣನ ದರ್ಶನಾ ತಗೋಂಡ್ರ ಅಂತ..ಇದ್ದಾಗ ಅಂತು ಆಗಲಿಲ್ಲಾ..ಹಿಂಗರೆ ನಿನಗ ದರ್ಶನಾ ಆಗಲಿ ಅಂತ..ಅದು ಹೆಂತಾ ಪ್ರೀತಿ..ಆಹಾ..ಬರೆಯುವ ಮುಂದ ಕಣ್ಣಾಗ ನೀರಿ ತುಂಬ್ಯಾವ ನಂಗ..ಜಸ್ಟ ಇಮ್ಯಾಜಿನ್ ದ ಸಿಚುವೇಶನ್…

Like

Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s