English is a funny language ಅಂತ,

The legend ಅಮಿತಾಭ್ ಬಚ್ಚನ್ ಅವರದು ಒಂದು dialog ಇತ್ತು, English is a funny language ಅಂತ,

ಹಂಗ ನಾವು ಕನ್ನಡ ಮೀಡಿಯಂ ಸಾಲ್ಯಾಗ ಕಲತಾವ್ರು English ಮಾತಾಡೂದು ಅಂದ್ರ ಭಾರಿ ಸಾಹಸದ್ದು ಕೆಲಸಾ,

ಮತ್ತ ಭಾಳ ಶೇರತಿತ್ತು.ಶೇರತಿತ್ತ ಏನೋ ಖರೆ ಬರಬೇಕಲಾ ಮಾತಾಡ್ಲಿಕ್ಕೆ…ನನ್ನ ಹಂಗ ನಮ್ಮ್ ಟೋಳೀ…ಸಾಲಿಯಿಂದ LIC founder’s day ಅಂತ ಹಾಡಿನ ಸ್ಪರ್ಧೆಕ್ಕ ಕರಕೊಂಡ ಹೋದರು,ಅಲ್ಲೆ ನೋಡಿದ್ರ ಹುಯ್ಯ ಅಂತ ಬ್ಯಾರೆ ಬ್ಯಾರೆ ಸಾಲಿ ಹುಡಗುರು, ಸಿಕ್ಕಾಪಟ್ಟೆ English ಮಾತಾಡಾವ್ರು,ನಾವು ನೋಡಿದ್ರ ಅಮ್ಮನ ಬುಟ್ಟಿ ಬಿಟ್ಟ ಹೋರಗ ಹೋದಾವ್ರಲ್ಲಾ,ಒಮ್ಮೆ  ನಮಗ ಭಾರಿ ಅಸಯ್ಯ್ ಅನ್ನೋಕಿಂತಾ ಏನ್ ಮಾಡಬೇಕು ಗೊತ್ತಾಗವಾಲ್ತಾತು, ನಾವು ಹೌದಲೇ, ಇಲ್ಲಲೇ,ಬಾರಲೇಪಾ,ಕುಂಡರ್ಲೇ ಅನ್ಕೋತ ಈ ನಮೂನಿ ಹುಂಬ.ಇರಲಿ ಸೋಲು ಒಪ್ಪಕೋಳೊದು ನಮ್ಮ ಜಾಯಮಾನದಾಗ ಇಲ್ಲಾ,ಏನ್ ಮಾಡೋದು ಅಂತ ವಿಚಾರ ಮಾಡಿ ಕಡಿಕ ಒಂದು ಪ್ಲಾನ ಬಂತು.

ನನ್ನ ಗೆಳತಿಗೆ ಅಂದೆ “ನಮ್ಮ English poem ಯಾವುದ್ಲೇ ಅದು  “if you could have a pair of wings do you suppose that”? ಬಾಯಹಾಟ್ ಬರದೆನ್ಲೇ ಅಂದೆ ಅದಕ್ಕ ಅಕಿ ಹೌದು ಅಂದ್ಲು, ಆತಬಿಡು ಹಂಗ ಅಂದ್ರ ಎಲ್ಲಾರಿಗು ಅದು ಬರ್ಲಿಕ್ಕಿಲ್ಲಾ ನಂಗ ನಿಂಗ ಬರದಲಾ ಸಾಕು,ಬ್ಯಾರೆ ಸಾಲಿ ಹುಡಗುರು ನಮ್ಮ ಮುಂದ ಹಾಯ್ದು ಹೋಗುಮುಂದ ಆ poem ಮಾತಿನ ಹಂಗ ಮಾತಾಡು ಗೋತ್ತಾತಿಲ್ಲೋ? ಅಂದೆ ಅದಕ್ಕ ಅಕಿನು ಹುಂ ಅಂದ್ಲು..ಮುಂದ ಸ್ವಲ್ಪ ಹೊತ್ತಿಗೆ ಆಕಡೆ ಇಕಡೆ ಬರು ಹೋಗಾವ್ರ ಮುಂದ “hey ಕೇಳಿಲ್ಲೆ if you could have pair of wings,ಏನ್ ಮಾಡತಿದ್ದಿಲೇ? do you suppose that? ಅದಕ್ಕ ಅಕಿ I would choose pair of robins wings ಲೇ ಆಮ್ಯಾಲೆ scream  across the ಆಕಾಶಾ ಲೇ ಪಾ,ಹಂಗು ಹೀಂಗು ಪಾರಾಗಿ 3rd Prize ತಗೋಂಡು ಮನಿಗೆ ಬಂದೆ.ಅಷ್ಟರಾಗ ನಮ್ಮ ಅಮ್ಮಾ ನೀರ ತುಂಬ ನಡಿ ಅಂತ ಟಾಕಿ ಮ್ಯಾಲೆ ಹತ್ತಸಿದ್ಲು.English ಗುಂಗು ಇನ್ನು ಇಳದಿದ್ದಿಲ್ಲಾ,ನನ್ನ್ ನನಗ ಭಾರಿ ಏನೋ ಸಾಧಿಸಿದ ಹಂಗ ಖುಷಿ ಆಗಿತ್ತು,ನಾನು ಭಾರಿ ಶ್ಯಾಣ್ಯಾ ನನ್ನ ಮುಂದ ಯಾರು ಇಲ್ಲಾ ಅಂತ ಮನಸನ್ಯಾಗ ಅನಕೋತ ಟಾಕಿ ಹತ್ರ ನೋಡಿದೆ,ಮುಚ್ಚಳದ ಮ್ಯಾಲೆ ಹಸರು ಪಾಚಿಗಟ್ಟಿತ್ತು,ಅಲ್ಲೇ ಬಿದ್ದಿದ್ದು ಕಲ್ಲು ತಗೋಂಡು ಅದರ ಮ್ಯಾಲೆ ಬರದೆ,ರೇವತಿ ಅಂದ್ರ ಗ್ರೇಟ್ ನನ್ನಕಿಂತಾ ಹೆಚ್ಚಿಂದೇನು ಇಲ್ಲಾ..ಇದನ್ನ English ನ್ಯಾಗ ಬರಿಬೇಕಲ್ಲಾ ಈಗ.ಅದಕ್ಕ ನಾನು revati is great and revati is no more ಅಂತ ಭಾರಿ ಗರ್ವದಿಂದ ಬರದು, ಕೆಳಗ ಇಳದು ಮುಂದ ವಿಷಯಾ ಮರತಬಿಟ್ಟೆ,ಏರಡು ದಿನಾ ಬಿಟ್ಟು ನಮ್ಮ ದೋಡ್ಡಪ್ಪನ್ನ ಮಗಳು ನೀರು ತುಂಬ್ಲಿಕ್ಕೆ ಹೋದಾಗ ನಾ ಬರೆದದ್ದು ನೋಡಿ ,ನಮ್ಮ್ ಅಪ್ಪಾಜಿ ಮುಂದ ಹೇಳಿ,ಅವರ ನನ್ನ ಕರದು ಹತ್ರ ಕುಡಿಶ್ಕೋಂಡು “ಅವಕ್ಕಾ ನಿಂಗ ಏನ್ ತ್ರಾಸ್ ಆಗ್ಲಿಕತ್ತದ?ಯಾರು ಏನು ಅಂದ್ರು? ಸಾಲ್ಯಾಗ ಏನಾತೆನು? ಅಂತ ಕೇಳಿಕತ್ರು..ಅದಕ್ಕ ನಾನು ಏನು ಇಲ್ಲರಿ ಅಪ್ಪಾಜಿ ಈ ಸರೆ ಗಣಿತ ಪಾಸ್ ಆಗೆನ್ರಿ.ಯಾಕ್ ನೀವ ಹಿಂಗ ಕೇಳೀಕತ್ತಿರಿ? ಅಂದದ್ದಕ್ಕ ಟಾಕಿ ಮ್ಯಾಲೆ ಯಾಕ ಹಂಗ ಬರದಿ ಮತ್ತ? ಅಂದರು ಅದಕ್ಕ ಅಯ್ಯಯ…ನಾನು ಗ್ರೇಟ್ ನನ್ನಕಿಂತಾ ಹೆಚ್ಚಿಂದು ಏನಿಲ್ಲಾ ಅನ್ನೋದನ್ನ English translation ಮಾಡಿನಿ ಅಂದೆ, ಅದಕ್ಕ ಅವರು relax ಆಗಿ ಭಾಳ ಶ್ಯಾಣ್ಯಾ ಇದ್ದಿ ಹೋಗು ಅಂದ್ರು…..”ಸೊ ಇಂಗ್ಲೀಸ್ ಇಸ್ ಅ ಫನ್ನಿ ಲಾಂಗವೇಜ್”

 

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s