ನೊ ಮೊಮ್,ಇಟ್ಸ್ ಓ ಕೆ..ಯುವರ ಪ್ಲಾನ್ ಇಸ್ ಇನ್

ನಾಲ್ಕು ಮನಿನೋ? ೬ ಮನಿನೊ? ಒಂಟಿ ನೋ? ಜೋಡಿ ನೋ? ಎರಡನೇ ಮನಿಯಿಂದ ಚಿಮ್ಮೊದೊ? ಮೂರನೇ ಮನಿಯಿಂದ ಚಿಮ್ಮೋದೊ?ಅಂತ ಉರಿ ಉರಿ ಬಿಸಿಲಿನಲ್ಲಿ,ಮಣ್ಣಿನ ನೆಲಕ್ಕೆ ಕೋಲಿನಿಂದ ೪ ಅಕ್ಕಪಕ್ಕ ಮನೆ ಗಿಚೋದೆ ನಮ್ಮ ಕುಂಟಾಪಿಲ್ಲೆ ಆಟ. ನೀಲಿ ಸ್ಲಿಪರ್ ಹಾಕಿಕೂಂಡು ಕೆಲ ಒಬ್ಬರು ಅದರೆ,ಅದೆ ಚಪ್ಪಲಿ ಗೆ ಉಂಗುಷ್ಟ ಕಿತ್ತಿದಲ್ಲಿ ಪಿನ್ನಿನಿಂದ ಜೋಡಿಸಿ ಹಾಕಿಕೊಂಡ ನೆನಪು,ಪ್ಲಾಸ್ಟಿಕ್ ಹೈರ್ ಬ್ಯಾಂಡಿ ಗೆ ಕ್ಲಿಪ್ ಹಾಕಿ ಬಾಡಿದ ಮಲ್ಲಿಗೆ ಹೂವಿನ ಮಾಲೆ,ಚಿಲಿಪಿಲಿ ಹಕ್ಕಿಗಳಂತೆ ಕೆಂಪು,ಹಸಿರು,ನೀಲಿ ಬಣ್ಣಗಳ ಅಂಗಿ.ನೆನೆಸಿಕೂಂಡರೆ ಆಹಾ!ಸ್ವರ್ಗ..

೮ರಿಂದ ೧೦ ಜನರ ಟೀಮ್ ನಮ್ಮದು,ಗುಂಪುಮಾಡಿ ಆಟ ಭರದಿಂದ ಸಾಗಿತ್ತು,ಒಬ್ಬರು ಗೆರೆ ದಾಟ್ಲಿಲ್ಲಾ,ಇನ್ನೋಬ್ರುದು ಕಾಲಿನ ಬ್ಯಾಲನ್ಸ್ ತಪ್ಪಿತು..ಹೀಗೆ ಏನೆನೋ ಆಗಿ,ಇನ್ನೆನು ನಾನು ನನ್ನ ಪಾರ್ಟನ್ನರ್ ಆಟ ಶುರು ಮಾಡಬೇಕು ಅನ್ನೋ ಅಷ್ಟರಲ್ಲಿ,ನನ್ನ ಕಿವಿಲಿ ಬಂದು “ರೇವು ನಂಗ ಜೋರಲೆ ಎರಡಕ್ಕ ಬಂದದಲೇ” ಅಂತಾ ಮುಖ ಚಿಕ್ಕದು ಮಾಡಿ ಹೇಳಿದ್ಲು,ಯವ್ವಾ ಎನ್ ವಾ ನೀ,ಎಗ್ಗಳಗೆ ಯಾಕೆ ತಿನ್ನಬೇಕು? ನಂಗ ಗೋತ್ತಿಲ್ಲ್ಲ ನೋಡವಾ,ಇ ಆಟಾ ಮುಗಿಸಿ ಹೋಗು ಅಂದೆ.ಯೇ ಇಲ್ಲಾ ಜೋರಲೆ ಬಂದದ ತಡ್ಕೋಳಿಕ್ಕೆ ಆಗವಾಲ್ತು,ಅಂದಾಗ ನಾನು ಬಾಕಿ ಗೆಳತಿಯರ ಹತ್ತಿರ “ನಮಗೆ ಸ್ವಲ್ಪ ಟ್ಯಾಮ್ ಪ್ಲೀಸ್ ಬೇಕು,ಇಕಿಗೆ ಹೋಗೋದ ಅದ ಅಂತ.ನನಗೆ ಗೋತ್ತಿತ್ತು ಅವರು ಕೋಡೊದಿಲ್ಲ ಅಂತ,ಅಂದರು ಕೇಳಿದೆ..ಓ ಹೋ ಹೋ ಆಗೋದಿಲ್ಲ ವಾ..ಆಡಿ ಮುಗಸ್ರಿ,ಇಲ್ಲಾ ಸೋತವಿ,ಸೌತಿ ಕಾಯಿ ತಿಂದ್ವಿ ಅಂತ ಒಪ್ಪಗೋರಿ,ಅಂತ ಗಲಾಟೆ ಮಾಡತಿದ್ರು,

ನನಗೆ ನನ್ನ ಗೆಳತಿ ಮೇಲೆ ಎಲ್ಲಿಲ್ಲದ ಕೋಪ ಬಂತು,ಮಾಡಿ ಉಪಯೋಗ ಇಲ್ಲಾ,ಅದಕ್ಕೆ ಏನೋ ಉಪಾಯ ಹೋಳೆಯಿತು.ಅವಳನ್ನ ಕರೆದು ಕಿವಿಲಿ ಏನೋ ಹೇಳಿದೆ..ಪಾಪ ಅದು ನಾ ಹೇಳಿದ ಮೆಥೆಡ್ ಫಾಲ್ಲೊ ಮಾಡಿದ್ಲು,ಆಡಿದ್ಲು,ಮತ್ತೆ ಗೆದ್ದದ್ದು ನಾವೆ…ಯುಪ್ಪಿಪಿಪಿಪಿ..ಏಲ್ಲರಿಗೋ ಕ್ಯುರಿಯೊಸಿಟಿ,ಇಕಿ ಏನ್ ಹೇಳಿದ್ಲು? ಅಕಿ ಹೆಂಗ ಆಡಿದ್ಲು? ಅಂತ ಏಲ್ಲರೊ ನನ್ನ ಸುತ್ತಗಟ್ಟಿ ಕೇಳಿದ್ರು..ಅದಕ್ಕೆ ನಾನು ಹೇಳಿದೆ “ಸೂಜಿ ಕೂಡ್ತಿನಿ ಒಳಗ ಹೋಗ ಒಳಗ ಹೋಗ ಅಂತ ಅನ್ಕೋತ ಆಡು,ನೋಡು ಹೆಂಗ ಸಮಾಆಗ್ತದ ಏಲ್ಲಾ ಅಂದೆ”,ಮೊನ್ನೆ ಬೆಂಗಳೂರಿನಿಂದ ನನ್ನ ಮಗಳ ಜೋತೆ ನೈಟ್ ಜರ್ನಿ ಮಾಡತಿದ್ದೆ, ಬಸ್ ಸ್ಟಾರ್ಟ್ ಆಗಿ ಎರಡ ನಿಮಿಷನು ಆಗಿರ್ಲಿಲ್ಲಾ,ಅಮ್ಮಾ ಜೋರಲೆ ಪೊಟ್ಟಿ ಅಮ್ಮಾ ಅಂದಾಗಾ ಸೇಮ್ ಮೆಥೆಡ್ ಫಾಲ್ಲೊ ಮಾಡು ಅಂದಿದಕ್ಕೆ..ಇಬ್ಸ್..ವಾಟ್ ನಾನ್ಸೆಸೆನ್ಸ ಯು ಆರ್ ಟಾಕಿಂಗ್ ಮೊಮ್,ಏನರೇ ಹೇಳ್ತಿವಾ ನೀನು,..ಓ ತಂಗಿ..ನಾವೆಲ್ಲಾ ಮಾಡಿ ಬಿಟ್ಟೆವಿ,ಬೇಕಿದ್ರ ಅನ್ನು ಇಲ್ಲಾ ನಮ್ಮ ನಾಟಕದ ಡೈಲೊಗ್ ಅದಲಾ, ಹಂಗ “ಈಗ ಏನು ಮಾಡುವುದು? ಅನುಭವಿಸುವುದು ,“ಅಂದ ಹಾಗೆ ಮಧ್ಯದಲ್ಲಿ ನಿಲ್ಲಿಸುವವರೆಗೋ ಅನುಭವಿಸುವುದು, ಅಂತ ನಾನು ನಿದ್ದೆಗೆ ಹೋದೆ.ಬಸ್ಸು ನಿಲ್ಲಿಸಿದಾಗ,ಮಗಳನ್ನ ಎಬ್ಬಿಸಿದೆ..ನೊ ಮೊಮ್,ಇಟ್ಸ್ ಓ ಕೆ..ಯುವರ ಪ್ಲಾನ್ ಇಸ್ ಇನ್ ಅಂತ ಆಚೆ ತಿರುಗಿ ಮಲಗಿದಳು..!ಹೆಹೆಹೆಹೆ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s