ಹಾಡು ನೆನಪ ಆತು

ನಾನು ೬ನೇ ತ್ತಾ ಇದ್ದೆ,ಸಾಲಿ ಒಳಗ science experiment ಮಾಡ್ರಿ,ನಿಮ್ಮನ್ನಾ ಜಿಲ್ಲಾ ಮಟ್ಟದ ಸ್ಪರ್ಧೆಕ್ಕ ಕಳಸ್ತೀವಿ ಅಂತ ಹೇಳಿದ್ರು.ಸರಿ ಅಂತ ನಾನು ನನ್ನ ಗೆಳತಿ ಭಾರ್ಗವಿ ನಾಡಗೌಡ ಇಬ್ಬರು ಕೂಡಿ ಒಂದು experiment ತಯಾರ್ ಮಾಡ್ಕೊಂಡ್ವಿ.ಆವಾಗ ಶ್ರೀ ಜೇವೂರ ಸರ್ ನಮಗ ಹೆಡ್ ಮಾಸ್ತರ ಇದ್ದರು.ಅವರ ಮುಂದ ಹೋಗಿ ನಾವಿಬ್ರು ಭಾರಿ explain ಮಾಡ್ಲಿಕ್ಕೆ ಶುರು ಮಾಡಿದ್ವಿ.”Good morning sir,ನಾವಿಬ್ರು ಇಗ ಒಂದು experiment ತಯಾರ್ ಮಾಡಿವ್ರಿ,ನೀವು yes ಅಂದ್ರ ಶುರುಮಾಡ್ತಿವ್ರಿ ಅಂತ,ಆತು ಹೇಳ್ರಿ ಏನ್ ಮಾಡ್ತೀರಿ ಅಂತ ಸರ್ ಅಂದ್ರು…ಸರ್ ಏನಿಲ್ರಿ ಒಂದು ಚಸ್ಮಾ ವರಸೊ ಅರವಿ ತಗೊಳೊದ್ರಿ,ಅದನ್ನ ಉಪ್ಪಿನ್ನ ನೀರಾಗ ನೆನೆಸಿ ಇಡೊದ್ರಿ,ಅಮೇಲೆ ನಾಲ್ಕು ಮೂಲಿ ಘಟ್ಟಿ ಕಟ್ಟಿ ಕೆಳಗೆ Candle ಹಚ್ಚೋದ್ರಿ,,ಆಮೇಲೆ ಅದರ ಮ್ಯಾಲೆ ತತ್ತಿ ಇಡೊದ್ರಿ,ಆವಾಗ ಆ ತತ್ತಿ ಪುಟಿಲಿಕ್ಕೆ ಹತ್ತದ್ರಿ,ಇಷ್ಟರಿ ಅಂತ ಇಬ್ಬರು ಹೇಳಿ ಅವರ ಮಾರಿ ನೋಡ್ಲಿಕತ್ತಿದ್ವಿ.ಸರ್ ೨ ನಿಮಿಷ ಸುಮ್ನಿದ್ದು,ಅದಲ್ಲಾ ಗೊತ್ತಾತು…ಖರೆ ತತ್ತಿ ಯಾರು ಇಡತಿರಿ?ನೀನೊ?? ನಾಡಗೀರೋ? ಅಂತ..ಅಲ್ಲಿದ್ದ ಎಲ್ಲ್ಲಾteachers ನಗಲಿಕ್ಕ ಹತ್ತಿದ್ರು,ಆಮೇಲೆ ನಮಗು flash ಆಗಿ ನಕ್ಕೊತ ಹೋದ್ವಿ,ಅದನ್ನೇನು select ಮಾಡಲಿಲ್ಲಾ…..ಖರೇನ ಈಗ ಭಾಳ ನೆನಪ ಆಗ್ತಾವ….ನಮ್ಮ ಸಾಲಿ,ನಮ್ಮ Teachers…ನಮ್ಮ ಗೆಳತ್ಯಾರು….ಜೂನ್ ತಿಂಗಳ ಮಳಿ…ಹೊಸಾ ಪುಸ್ತಕದ್ದು ವಾಸನಿ,,,,,,ಪ್ಯಾರಲ್ ಹಣ್ಣು….ಹಶಿ ಕಾಲುಚೀಲಾ…ಈಗಿನ್ನ ಹುಡುಗುರಿಗೆ ಏನು ಗೋತ್ತಾಗ ಬೇಕು ಅದರ ಮಜ಼ಾ…Actually ತಪ್ಪಿಲ್ಲಾ ನಮ್ಮದ ಅಷ್ಟು ನಾಜುಕ ಬೇಳಸ್ಲಿಕತ್ತೀವಿ…………..ಸುಭದ್ರಾ ಕುಮಾರಿ ಚೌವ್ಹಾನ್ ಅವರದು “ಬಾರ್ ಬಾರ್ ಆತಿ ಹೈ ಮುಝಕೊ ಮಧುರ ಯಾದ ಬಚಪನ್ ತೇರಿ” ಹಾಡು ನೆನಪ ಆತು…

2 thoughts on “ಹಾಡು ನೆನಪ ಆತು

  1. Saralvagi aadubhashe barevangi …Goju gondla erlardu ….manasiga muttatad….Revati …dina kaytirtini ‘evatten hosadad odlikanta’ …hinga baritiru

    Liked by 1 person

  2. Revati… Odikota hodhanga nanaga, nanna saali nenpatu.. Na ommele sanna hudgi aagbitte.. Bhaal cholo bardiri… Aadu bhashi sogdu..hmm.. Innu ghum annlikhattad.. Hinga barkota irri…

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s